ಜಯತು ಜಯ ಗಣಪಾ 

ನಿನ್ನ ಧ್ಯಾನಿಪ  ಭಕ್ತ ಕೋಟಿಗೆ 

ತೋರು ನಿಜರೂಪಾ ||ಪ ||

ಜಯ ಗಣೇಶಾ   ಜನಮನ ಪ್ರೀತಾ 

ಶಕ್ತಿ ಶಿವ ಸುತ   ವಿಘ್ನ ವಿನಾಶಕ ||

ಸಿದ್ಧಿ ವಿನಾಯಕ  ಬುದ್ದಿ ಪ್ರದಾಯಕಾ 

ಶರಣೆಂಬೆ ಏಕದಂತ   ಜೈ ಪ್ರಕಾಶ 

 ಜ್ಯೋತಿ ನೀನಯ್ಯಾ || 

|| ಜಯತು ಜಯ ಗಣಪ||

ಜ್ಞಾನದಾತ  ಜೈ ಗಣನಾಥ 

ಆದಿಪೂಜಿತ ಮುನಿಜನ ಪ್ರೀತಾ ||

ಮೂಷಿಕ ವಾಹನ  ಮೂಜಗ ಪಾಲನ 

ಕಾಪಾಡು ದಿವ್ಯ ಜ್ಞಾನ  ಪ್ರೇಮ ಪೂರ್ಣ 

ಮೂರ್ತಿ ನೀನಯ್ಯಾ || 

||ಜಯತು ಜಯ ಗಣಪ||

ಪ್ರೀತ ಜನಪರಿಪಾಲಕ ನೀನೆ 

ಭೂತ ಗಣ ಸಂಸೇವಿತಾ ನೀನೆ ||

ದೀನನು ನಾನಯ್ಯ  ಜ್ಞಾನಿಯು ನೀನಯ್ಯ 

ನಾನಿನ್ನ ದಾಸನಯ್ಯ    ನಿನ್ನ ಪಾದ ಸೇವೆ ನೀಡಯ್ಯಾ ||

||ಜಯತು ಜಯ ಗಣಪ||

***