ಬಾರೋ ಕೃಷ್ಣಯ್ಯ |||
ನಿನ್ನ ಭಕ್ತರ ಮನೆಗೀಗ | ಬಾರಯ್ಯ
|| ಬಾರೋ ಕೃಷ್ಣಯ್ಯ ||
ಬಾರೋ ನಿನ್ನ ಮುಖ ತೋರೋ
ನಿನ್ನ ಸರಿ ಯಾರೋ |
ಜಗಧರ ಶೀಲನೆ ||
|| ಬಾರೋ ಕೃಷ್ಣಯ್ಯ||
ಅಂದುಗೆ ಪಾಡಗವು ಕಾಲಂದುಗೆ ಕಿರುಗೆಜ್ಜೆ
ದಿಂಧಿಮಿ ಧಿಮಿಧಿಮಿ ಧಿಮಿರೆನುತ ||
ಪೊಂಗೊಳಲನೂದುತಾ ಬಾರಯ್ಯ |||
|| ಬಾರೋ ಕೃಷ್ಣಯ್ಯ ||
ಕಂಕಣ ಕರದಲಿ ಹೊನ್ನುಂಗುರ ಹೊಳೆಯುತಾ
ಕಿಂಕಿಣಿ ಕಿಣಿ ಕಿಣಿ ಕಿಣಿರೆನುತಾ
ಪೊಂಗೊಳಲನೂದುತಾ ಬಾರಯ್ಯ ||
ಬಾರೋ ಕೃಷ್ಣಯ್ಯ
|| ಬಾರೋ ಕೃಷ್ಣಯ್ಯ ||
ವಾಸಾ ಉಡುಪಿಲಿ ನೆಲೆಯಾದಿ ಕೇಶವನೇ ||
ದಾಸಾ ನಿನ್ನ ಪಾದ ದಾಸಾ ||
ನಿನ್ನ ಪಾದ ದಾಸಾ ||
ಸಲಹಲು ಬಾರಯ್ಯ | ಬಾರೋ ಕೃಷ್ಣಯ್ಯ ||
|| ಬಾರೋ ಕೃಷ್ಣಯ್ಯ ||
***