ನೆರೆ ನಂಬಿದೆ ಮದ್ ಹೃದಯ ಮಂಟಪದೋಳ್

 ಪರಿಶೋಭಿಸುತಿರು ಪಾಂಡುರಂಗ ||

ಶರಣ ಜನರ ಸಂಸಾರ ಮಹಾಭಯ

ಹರಣ ಕರುಣ ಸಿರಿ ಪಾಂಡುರಂಗ ||

|| ಪ ||

ಪಾಂಡುರಂಗ ಹರಿ ಪಾಂಡುರಂಗ ||

ಪಾಂಡುರಂಗ ಹರಿ ಪಾಂಡುರಂಗ ||

|| ಅ.ಪ ||

ನೆರೆದಿಹ ಬಹುಜನರೊಳಿದ್ದರು 

ಮನಸ್ಥಿರವಿಡು ನಿನ್ನಲಿ ಪಾಂಡುರಂಗ ||

ಪರಿಪರಿ ಕೆಲಸವು ನಿನ್ನ ಮಹಾಪೂಜೆ

ನಿರುತಯೆನಗೆ ಕೊಡು ಪಾಂಡುರಂಗ ||

|| ಪಾಂಡುರಂಗ ಹರಿ ಪಾಂಡುರಂಗ ||

ಪರದೇವನೇ ನಿನ್ನ ಲೀಲಾ ಸ್ಮೃತಿಯನು

ನಿರುತ ಎನಗೆ ಕೊಡು ಪಾಂಡುರಂಗ ||

ಪರರಾಪೇಕ್ಷೆಯ ಬಿಡಿಸಿ ನಿರಂತರ

ಪರಗತಿ ಪಥ ತೋರೋ ಪಾಂಡುರಂಗ ||

 || ಪಾಂಡುರಂಗ ಹರಿ ಪಾಂಡುರಂಗ ||

ಸುಖವಾಗಲಿ ಬಹುದುಃಖವಾಗಲಿ

ಸಖ ನೀನಾಗಿರು ಪಾಂಡುರಂಗ ||

ನಿಖಿಲಾಂತರ್ಗತ ವ್ಯಾಸವಿಠಲ

ತವ ಮುಖಪಂಕಜ ತೋರೋ ಪಾಂಡುರಂಗ ||

 || ಪಾಂಡುರಂಗ ಹರಿ ಪಾಂಡುರಂಗ ||

 


***