ಏಳು ನಾರಾಯಣ
ಏಳು ಲಕ್ಷ್ಮೀರಮಣ
ಏಳು ಶ್ರೀಗಿರಿಯೊಡೆಯ ವೆಂಕಟೇಶ ||
|| ಪ ||
ದಾಸರೆಲ್ಲರು ಬಂದು
ಧೂಳಿ ದರುಶನಗೊಂಡು
ಲೇಸಾಗಿ ತಾಳ ದಂಡಿಗೆಯ ಪಿಡಿದು ||
ಕೇಶವನೆ ನಿನ್ನ ಸವಿ
ನಾಮವನು ಜಪಿಸುತಲಿ ||
ವಾಸುದೇವನೆ ಉದಯದಲಿ ಪಾಡುತಲಿಹರು |
|| ಏಳು ನಾರಾಯಣ ||
ಅರಳು ಮಲ್ಲಿಗೆ ಜಾಜಿ
ಪರಿಮಳದ ಪುಷ್ಪಗಳ
ನಿನಗೆ ತಂದಿಹರಯ್ಯ ಸುಜನರೊಡೆಯ ||
ಅರವಿಂದಲೋಚನನೇ
ಕೋಳಿ ಕೂಗಿತು ಏಳು ||
ಪುರಂದರ ವಿಠಲ ನೀನೇಳು
ಶ್ರೀಹರಿಯೇ |
|| ಏಳು ನಾರಾಯಣ |||
***