ಗುರುನಾಮಾಮೃತ ಗುರುನಾಮಾಮೃತ |
ಗುರುನಾಮಾಮೃತ ಸವಿಮನವೇ |
|| ಪ ||
ಗುರು ಸೇವೆಗೈವವಗೆ ಭವದ ಬಂಧನವಿಲ್ಲ ||
ಎಂಬುದ ನೀನರಿತು ನೆನೆ ಮನವೇ ||
|| ಗುರುನಾಮಾಮೃತ ||
ಪರಬ್ರಹ್ಮ ರೂಪನು ಹರಿಯಂತೆ ಕಾಯ್ವನು
ಶಿಷ್ಯರ ಉದ್ದರಿಸೋ ಶಿವನಿವನು ||
ಗಂಧದಿ ಪರಿಮಳವು ಇರುವಂತೆ ಇರುವವನು ||
ಜ್ಞಾನದ ಜ್ಯೋತಿಯ ಬೆಳಗುವನು ||
|| ಗುರುನಾಮಾಮೃತ ||
ಅಣುವಲಿ ಅಣು ಇವನು
ಮಹತೋಮಹಿಮನು
ಅರಿವಿಗೆ ಅರಿವು ತಾನಾಗಿಹನು ||
ರವಿಯನು ಮೀರಿಸೋ ತೇಜಸ್ವಿರೂಪನು ||
ಚೈತನ್ಯ ನೀಡುವ ಚಿನ್ಮಯನು ||
|| ಗುರುನಾಮಾಮೃತ ||
ಕಾಮಿತ ಫಲವೀವ ಗುರು ದೈವರಿರಲೇಕೆ
ಸಾವುನೋವಿನ ಭಯ ನಮಗೇಕೆ ||
ಶಾಂತಿಯ ನೀಡುವ ಅವಧೂತ ನಾಮವ ||
ಶುದ್ಧ ಭಾವನೆಯಲ್ಲಿ ನೆನೆ ಮನವೇ ||
|| ಗುರುನಾಮಾಮೃತ ||
***