ಗುರು ದರುಶನ ಜನ್ಮ ಪಾವನ ||||
ಗುರು ಗಾಯನ ಮುಕ್ತಿ ಸಾಧನ ||
|| ಗುರು ದರುಶನ ||
ಗುರುವಿನ ಸೇವೆ ಗಂಗಾ ಸ್ನಾನ ||
ಗುರುವಿನ ಮಂತ್ರ ಅಮೃತ ಪಾನ ||
ಗುರುವಿನ ಪ್ರೇಮ ಸ್ವರ್ಗಕ್ಕೆ ಸೋಪಾನ ||
ಗುರುಕೃಪೆಯೇ ಸರ್ವಶಕ್ತಿಗೆ ಸಾಧನ ||
|| ಗುರು ದರುಶನ ||
ಗುರುವಿಲ್ಲದ ಬಾಳು ಬರಿ ಬರಡಿದ್ದಂತೆ ||
ಗುರು ದೊರೆಯದೊಡೆ ಕತ್ತಲೆ ಕವಿದಂತೆ ||
ಗುರು ಬಯಸದ ಜನ್ಮ ಕಾರ್ಕೋಟ ವಿಷದಂತೆ ||
ಗುರುಧ್ಯಾನ ಮಾಡದವ ಇದ್ದರು ಇರದಂತೆ ||
|| ಗುರು ದರುಶನ ||
***