ಪಾರ್ವತಿ ತಪಸಿನ ಪುಣ್ಯಫಲ

ಗಣಪತಿ ಎಂಬ ಮಹಾಬಲ ||

|| ಪ ||

ಎಲ್ಲ ಬಲ್ಲ ಈ ವಲ್ಲಭನು

ವೀರಾಗ್ರಣಿಗಳ ವೀರನು 

|| ಪಾರ್ವತಿ ತಪಸಿನ ||

ಮೋದಕ ಹಸ್ತದ ಮೂಷಿಕ ವಾಹನ

ಮೋದವ ತರುವನು ಅನುದಿನ ||

ಚೌತಿಯ ಗಣಪನ ನೆನೆದ ತಕ್ಷಣ

ಧನ್ಯವಾಗುವುದು ಜೀವನ

|| ಪಾರ್ವತಿ ತಪಸಿನ ||

ಗೌರಿಯ ಜೊತೆಯಲಿ ಬರುವ ಗಣಪತಿ

ತಾಯಿಯ ಮೇಲೆ ಇವನಿಗೆ ಪ್ರೀತಿ ||

ನೀಡುವ ಜನರಿಗೆ ನಿರ್ಮಲ ಭಕ್ತಿ

ಇವನೆ ತರುವನು ಶಾಶ್ವತ ಕೀರ್ತಿ 

|| ಪಾರ್ವತಿ ತಪಸಿನ ||



***