ಚಿಂತೆ ಏಕೆ ಮನವೇ 

ಗುರು ರಾಘವೇಂದ್ರನಿರಲು ||

ಚಿಂತೆ ಕಳೆದು ನಿಶ್ಚಿಂತೆಯಿಂದ ||

ಇರುವಂತೆ ಮಾಡುವ ಚಿಂತಾಮಣಿಯಿರೆ |

|| ಚಿಂತೆ ಏಕೆ ಮನವೇ ||

ಭೀತಿ ಏಕೆ ಮನವೇ 

ಗುರುರಾಯ ಬಳಿಯಲ್ಲಿ ಇರಲು ||

ಭೀತಿ ಕಳೆದು ನಿರ್ಭೀತಿಯಿಂದ ||

ಇರುವಂತೆ ಮಾಡುವ ಗುರುರಾಯನಿರಲು |

|| ಚಿಂತೆ ಏಕೆ ಮನವೇ ||

ದುಃಖವೇತಕೆ ಮನವೇ

ಸದ್ಗುರು ನಾಮ ನಿನ್ನಲ್ಲಿರಲು||

ದುಃಖ ಕಳೆದು ಸುಖ ನೀಡಲೆಂದೇ ||

ಗುರು ಸಾರ್ವಭೌಮನು ಇರುವಾಗ ನಿನಗೆ |

|| ಚಿಂತೆ ಏಕೆ ಮನವೇ ||

ಮುಳುಗಬೇಡ ಮನವೇ  

ಆಸೆಯ ಕಡಲಲ್ಲಿ ನೀನು ||

ತಾವರೆ ಎಲೆಯು ಜಲರಾಶಿಯಲ್ಲಿ ||

ಇರುವಂತೆ ನೀನಿರೆ ಗುರುರಾಯ ಮೆಚ್ಚುವ |

|| ಚಿಂತೆ ಏಕೆ ಮನವೇ ||

 ***