ಆದದ್ದೆಲ್ಲಾ ಒಳಿತೇ‌ ಆಯಿತು ||

ನಮ್ಮ ಶ್ರೀಧರನ ಸೇವೆಗೆ 

ಸಾಧನ ಸಂಪತ್ತಾಯಿತು |

||  ಪ ||

ದಂಡಿಗೆ ಬೆತ್ತ ಹಿಡಿಯುದಕ್ಕೆ 

ಮಂಡೆಮಾಚಿ ನಾಚುತಲಿದ್ದೆ ||

ಹೆಂಡತಿ ಸಂತತಿ ಸಾವಿರವಾಗಲಿ

ದಂಡಿಗೆ ಬೆತ್ತ ಹಿಡಿಸಿದಳಯ್ಯ |

||  ಆದದ್ದೆಲ್ಲಾ ಒಳಿತೇ‌ ||

ಗೋಪಾಳಬುಟ್ಟಿ ಹಿಡಿಯುವುದಕ್ಕೆ 

ಭೂಪತಿಯಂತೆ ಗರ್ವಿಸುತ್ತಿದ್ದೆ ||

ಆ ಪತ್ನಿ ಕುಲ ಸಾವಿರವಾಗಲಿ

ಗೋಪಾಳಬುಟ್ಟಿ ಹಿಡಿಸಿದಳಯ್ಯ ||

||  ಆದದ್ದೆಲ್ಲಾ ಒಳಿತೇ‌ ||

ತುಳಸಿಮಾಲೆಯ ಹಾಕುವುದಕ್ಕೆ ಅರಸನಾಗಿ ನಾಚುತಲಿದ್ದೆ ||

ಸರಸಿಜಾಕ್ಷ ನಮ್ಮ ಪುರಂದರವಿಠ್ಠಲನು

ತುಳಸಿಮಾಲೆ ಹಾಕಿಸಿದನಯ್ಯ |

||  ಆದದ್ದೆಲ್ಲಾ ಒಳಿತೇ‌ ||

***