ಕೋಟಿ ಕೋಟಿ ನಮನ ನಿನಗೆ ಮಹಾಗಣಪತಿ

ಲಕ್ಷ ಲಕ್ಷ ದೀಪಾರ್ಚನೆ ದಿವ್ಯಗಣಪತಿ ||

ಮಹಾಗಣಪತಿ ದಿವ್ಯಗಣಪತಿ

ಮಹಾ ಗಣಪತಿ |

|| ||

ಇಳಿದು ಬಾ ಇಳಿದು ಬಾ 

ಇಳಿದು ಬಾ ಗಣಪತಿ

ಕೈಲಾಸ ಗಿರಿಯಿಂದ ಧರೆಗಿಳಿದು ಬಾ ||

ಬೆಳಗಿ ಬಾ  ಹೊಳೆದು ಬಾ ||

ಗಣಪತಿ ಗಣಪತಿ |

ಮುತ್ತಿರುವ ಕತ್ತಲನ್ನು ದೂರ ಮಾಡು ಬಾ |

ಮುತ್ತಿರುವ ಕತ್ತಲನ್ನು ದೂರ ಮಾಡು ಬಾಬಾ ಬಾಬಾ |

|| ಕೋಟಿ ಕೋಟಿ ನಮನ ||

ಅಕ್ಕರೆಯ ಆಕಾರ ಮೈ ತಳೆದು ಬಾ

ಸೌಮ್ಯದ ಸಾಕಾರ ಮೂರ್ತಿಯಾಗಿ ಬಾ ||

ನಲಿದು ಬಾ  ಒಲಿದು ಬಾ ||

ಗಣಪತಿ ಗಣಪತಿ |

ಇಳೆಯತ್ತ ಹರ್ಷ ವರ್ಷ ಸುರಿಸುತ್ತ ಬಾ |

ಇಳೆಯತ್ತ ಹರ್ಷ ವರ್ಷ

ಹರಿಸುತ್ತ ಬಾ ಬಾ ಬಾಬಾ |

|| ಕೋಟಿ ಕೋಟಿ ನಮನ ||

ಕೈ ಮುಗಿದು ಬೇಡುತಿರುವೆ ಕರುಣಾಕರ

ಲೋಕ ರಕ್ಷಕ ಹೇ ವಿಘ್ನೇಶ್ವರ ||

ನಮ್ಮ ಎದೆಯಲೀ ನಮ್ಮ ನೆಲದಲೀ |

ನಮ್ಮ ಎದೆಯಲೀ ನೆಲದಲೀ

ಗಣಪತಿ ಗಣಪತಿ |

ಸದಾ ಇದ್ದು ನಮ್ಮನ್ನು ಹರಸು ಹರಸು ಬಾ |

ಸದಾ ಇದ್ದು ನಮ್ಮನ್ನು ಹರಸು ಹರಸು ಬಾ ಬಾ ಬಾಬಾ |

|| ಕೋಟಿ ಕೋಟಿ ನಮನ ||



***