ಮೆಲ್ಲ ಮೆಲ್ಲನೆ ಬಂದನೇ
ಗೋಪಮ್ಮ ಕೇಳೇ ಮೆಲ್ಲ ಮೆಲ್ಲನೇ ಬಂದನೇ ||
|| ಪ ||
ಮೆಲ್ಲಮೆಲ್ಲನೆ ಬಂದು ಗಲ್ಲಕೆ ಮುದ್ದ ಕೊಟ್ಟು ||
ನಿಲ್ಲದೆ ಓಡಿಹೋದ ಕಳ್ಳಗೆ ಬುದ್ಧಿ ಪೇಳೆ ||
|| ಮೆಲ್ಲ ಮೆಲ್ಲನೆ ||
ಹಾಲು ಮಾರಲು ಪೋದರೆ ನಿನ್ನಯ ಕಂದ
ಕಾಲಿಗಡ್ಡವ ಕಟ್ಟಿದ ||
ಹಾಲಾ ಸುಂಕವ ಬೇಡಿ ಕೋಲನ್ನೇ ಅಡ್ಡಕಟ್ಟಿ ||
ಸೀರೆಯ ಸೆಳಕೊಂಡು ಹೇಳದೋಡಿದ ಕೃಷ್ಣ ||
|| ಮೆಲ್ಲ ಮೆಲ್ಲನೆ ||
ಮೊಸರ ಮಾರಲು ಪೋದರೆ ನಿನ್ನಯ ಕಂದ ಹೆಸರೇನಂದಲಿ ಕೇಳಿದ ||
ಹಸನಾದ ಹೆಣ್ಣ ಮೇಲೆ ಕುಸುಮಾವ ತಂದಿಕ್ಕಿ ||
ಶಶಿಮುಖಿಯರನೆಲ್ಲ ವಶವ ಮಾಡಿದನೀತ ||
|| ಮೆಲ್ಲ ಮೆಲ್ಲನೆ ||
ಪೋಗಿರೆ ರಂಗಯ್ಯನ ಮೇಲೆ ನೀವು ದೂರೇನು ಕೊಂಡುಬಂದಿರೆ ||
ಯೋಗೀಶ ಪುರಂದರ ವಿಠಲ ನಾರಾಯಣ ||
ತೂಗಿಪಾಡಿರೆ ಬೇಗ ನಾಗವೇಣಿಯರೆಲ್ಲ ||
|| ಮೆಲ್ಲ ಮೆಲ್ಲನೆ ||
|