ತಂಬೂರಿ‌ ಮೀಟಿದವ

ಭವಾಬ್ಧಿ ದಾಟಿದವ ||

|| ಪ ||

ತಾಳವ ತಟ್ಟಿದವ

ಸುರರೊಳು ಸೇರಿದವ ||

|| ತಂಬೂರಿ ಮೀಟಿದವ ||

ಗೆಜ್ಜೆಯ ಕಟ್ಟಿದವ 

ಖಳರೆದೆಯ ಮೆಟ್ಟಿದವ ||

ಗಾನವ ಪಾಡಿದವ

ಹರಿ ಮೂರುತಿ ನೋಡಿದವ ||

|| ತಂಬೂರಿ ಮೀಟಿದವ ||

ವಿಠ್ಠಲನ ನೋಡಿದವ |

ಪುರಂದರ ವಿಠ್ಠಲನ ನೋಡಿದವ |

ವಿಠ್ಠಲನ ನೋಡಿದವ 

ವೈಕುಂಠಕೆ ಓಡಿದವ ||

|| ತಂಬೂರಿ ಮೀಟಿದವ ||

***