ಭ್ರಮರಾಂಬೆ ನೀನು ಭುವಿಗಿಳಿದೆಯೇನು ||
ಭವಭೀತಿ ಭ್ರಮೆ ನೀಗಲು II
|| ಭ್ರಮರಾಂಬೆ ನೀನು ||
ನಂದಿನಿ ಸುತೆಯಾಗಿ ಧರೆಗಿಳಿದು ಬಂದೆ
ಆನಂದ ರೂಪದಿ ಕಟೀಲಲಿ ನಿಂದೆ ||
ಮೋಹಾಂಧ ಅಸುರ ಅರುಣನ ಕೊಂದೆ ||
ವರದೆ ಅಭಯೆ ಕರುಣೆ ಸದಯೆ ಕಟೀಲೇಶ್ವರಿ I
|| ಭ್ರಮರಾಂಬೆ ನೀನು ||
ತ್ರಿಭುವನ ಮೋಹಿನಿ ದುರ್ಗಾ ಭವಾನಿ
ಅಭವನ ರಾಣಿ ಆಶ್ರಿತ ಜನನಿ ||
ಸಜ್ಜನ ರಕ್ಷಣಿ ದುರ್ಜನ ದಮನಿ ||
ವಿಮಲ ಚರಿತೆ ಭುವನ ಮಾತೆ ಕಟೀಲೇಶ್ವರಿ I
|| ಭ್ರಮರಾಂಬೆ ನೀನು ||
***