ತಿಂಗಳು ಮುಳುಗಿದವೋ

ರಂಗೋಲಿ ಬೆಳಗಿದವೋ

ಸ್ವಾಮಿ ಅಯ್ಯಪ್ಪನ ಪೂಜೆಗಾಗಿ

ಬಾಳೆ ಬಾಗಿದವೋ || ಪ ||

ಕಾರ್ತಿಕ ಮಾಸದಲಿ ಮಾಲೆಯನು ಧರಿಸಿ

ಸ್ವಾಮಿ ಅಯ್ಯಪ್ಪನ ಕಾಣಲೆಂದು ಸಾಲು ಸಾಗಿದೆವೋ 

|| ತಿಂಗಳು ಮುಳುಗಿದವೋ ||

ಇರುಮುಡಿಯನು ಹೊತ್ತು ಎರಿಮಲೆಯನು ಹತ್ತಿ

ಸ್ವಾಮಿ ಅಯ್ಯಪ್ಪನ ಕಾಣಲೆಂದು ಸಾಲು ಸಾಗಿದೆವೋ 

|| ತಿಂಗಳು ಮುಳುಗಿದವೋ ||

ಅಳುದಾ ಸ್ನಾನವ ಮಾಡಿ ಅಳುದಾ ಬೆಟ್ಟವ ಹತ್ತಿ

ಸ್ವಾಮಿ ಅಯ್ಯಪ್ಪನ ಕಾಣಲೆಂದು ಸಾಲು ಸಾಗಿದೆವೋ 

|| ತಿಂಗಳು ಮುಳುಗಿದವೋ ||

ಕರಿಗಿರಿ ಬೆಟ್ಟದಲಿ ಕಲ್ಲು ಮುಳ್ಳು ತುಳಿದು

ಸ್ವಾಮಿ ಅಯ್ಯಪ್ಪನ ಕಾಣಲೆಂದು ಸಾಲು ಸಾಗಿದೆವೋ 

|| ತಿಂಗಳು ಮುಳುಗಿದವೋ ||

ಪಂಪಾನದಿಯ ಸ್ನಾನ ಪವಿತ್ರವಾದ ಸ್ನಾನ

ಕನ್ನಿಮೂಲ ಗಣಪನ ದರುಶನ ಮಾಡಿ

ಬಾಳು ಬೆಳಗಿದವೋ ||

|| ತಿಂಗಳು ಮುಳುಗಿದವೋ ||

ಸ್ವಾಮಿಯ ಸನ್ನಿಧಾನ ಸ್ವರ್ಗಕ್ಕೆ ಸಮಾನ 

ಸ್ವಾಮಿ ಅಯ್ಯಪ್ಪನ ದರ್ಶನ ಮಾಡಿ

ಬಾಳು ಬೆಳಗಿದವೋ 

|| ತಿಂಗಳು ಮುಳುಗಿದವೋ || 


***