ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ ||
ಕರೆಯುವರು ಅವನನ್ನೇ ಮಂಜುನಾಥ ||
|| ಪ ||
ಧರ್ಮದ ಮರ್ಮವಿಹ ಈ ನೆಲ ||
ಕನ್ನಡದ ಹಿರಿಮೆಯ ಧರ್ಮಸ್ಥಳ||
|| ಕಾಶಿಯಿಂದ ಬಂದನಿಲ್ಲಿ ||
ನೇತ್ರಾವತಿ ಬಂದಳು ಮಾಯೆಯಾಗಿ
ದೇವಗಂಗೆಯಂತೆಯೇ ಪಾವನೆಯಾಗಿ ||
ಅಣ್ಣಪ್ಪ ಬಂದನಿಲ್ಲಿ ಸೇವೆಗಾಗಿ
ಭೂತ ಪ್ರೇತ ಸೇನೆಗೆ ನಾಥನಾಗಿ ||
|| ಕಾಶಿಯಿಂದ ಬಂದನಿಲ್ಲಿ ||
ಹಿಂದು ಜೈನ ಧರ್ಮದ ಸಂಗಮವಿಲ್ಲಿ
ಎಂದು ಸಾರುತಿಹನು ಬಾಹುಬಲಿ ||
ಇಂತ ಪುಣ್ಯ ಕ್ಷೇತ್ರಕೆ ಸಾಟಿಯೆಲ್ಲಿ
ಯಾತ್ರಿಕನೆ ಧನ್ಯನಾಗಿ ನಲಿ ನಲಿ ||
|| ಕಾಶಿಯಿಂದ ಬಂದನಿಲ್ಲಿ ||