||ಶುಕ್ಲಾಂಭರಧರಂ ವಿಷ್ಣುಂ   ಶಶಿವರಣಂ ಚತುರ್ಭುಜಂ  

ಪ್ರಸನ್ನವದನಂ  ಧ್ಯಾಯೇತ್  ಸರ್ವ ವಿಘ್ನೋಪ ಶಾಂತಯೇ ||


ಶ್ರೀ ವಿಘ್ನೇಶ್ವರ ವಿನಾಯಕ 

ವರಪ್ರಸಾದಿಸೋ ಗಜಾನನ ||

 || ಶ್ರೀ ವಿಘ್ನೇಶ್ವರ   ||

ಸುಮುಖನೆ ಹೇರಂಭ ಏಕದಂತನೆ 

ಸುರಮುನಿ ವಂದಿತನೆ ಗಜಕರ್ಣನೇ

ಧೂಮ್ರಕೇತುಗಳ ನಾಯಕ ಗಜಮುಖ

ಲೋಕಪಾಲಕ ತಂದೇ ಗಣಪತಿ

|| ಶ್ರೀ ವಿಘ್ನೇಶ್ವರ   ||

ಭಾದ್ರಪದ ಶುಕ್ಲ ಚೌತಿ ನಿನ್ನ ಪೂಜಿಸೇ

ಭಕ್ತಗೆ ನೀಡುವೆ ನೀ ಸರ್ವಮಂಗಳ

ಭಾಗ್ಯದಾತ ಜಗವಂದಿತ ಗಣಪತಿ

ಬಾಳ ಬೆಳಗಿ ನೀಡು ಬಾರೋ ಸನ್ಮತಿ 

|| ಶ್ರೀ ವಿಘ್ನೇಶ್ವರ   ||

***