ಓ ಎನ್ನು ಬಾ ಗಣಪಾ
ಕರೆದಾಗ
ಓ ಎನ್ನು ಬಾ ಗಣಪಾ || ಪ ||
ಓಂಕಾರ ನಾದಲೋಲ ಹೇ ಗಣಪಾ
ಓಂಕಾರ ರೂಪ ಹೇ ಗಣಪಾ ||
||ಓ ಎನ್ನು ಬಾ ಗಣಪಾ ||
ಮಾಯಾ ವಿನಾಶಕ ಮೂಷಿಕ ವಾಹನ
ಮಾತಾ ಭವಾನಿ ಪಾರ್ವತಿ ನಂದನ ||
ಮಹಾಗಣಪತೇ ಪರಮ ದಯಾಘನ
ಶಂಭೋ ನಂದನ ಕರೆವೆನು ನಾ ||
||ಓ ಎನ್ನು ಬಾ ಗಣಪಾ ||
ಗಜಮುಖದವನೇ ಗಣಗಳಿಗೊಡೆಯ
ಮೊದಲ ಪೂಜೆಯನು ಪಡೆಯುವ ದೇವನೇ ||
ಆತ್ಮಲಿಂಗವನು ಧರೆಯಲಿ ಇಟ್ಟವನೆ
ಬಾಲ ಗಣೇಶನೇ ಕರೆವೆನು ನಾ ||
||ಓ ಎನ್ನು ಬಾ ಗಣಪಾ ||
***