ಭಾವದಲೆಯಲಿ ಶಾರದೆಗಾನ
ರಾಗ ಹೊಮ್ಮಲು ಶಾರದೆ ನಾಮ ||
ಹೃದಯ ಹಾಡಿತು ಶಾರದೆ ಗಾನ||
ಶಾರದೆ ಗಾನ ಶೃಂಗೇರಿಯ ಧ್ಯಾನ|||
||ಭಾವದಲೆಯಲಿ||
ನನ್ನಯ ಮನವಿಂದು ಶಾರದೆ ಸದನ||
ಹೃದಯ ಜ್ಯೋತಿ ಬೆಳಗಿಪೆನು
ಅವಳಿಗೆ ದಿನ ನಾ ||
ರೋಮಾಂಚನ ತಾಯಿ ಶಾರದೆ ಧ್ಯಾನ||
ಶಾರದೆ ಗಾನ ಶೃಂಗೇರಿಯ ಧ್ಯಾನ |||
||ಭಾವದಲೆಯಲಿ||
ತಾಯಿ ದರುಶನದಿಂದ ಅರಳಿತು ವದನ ||
ಅಂಧಕಾರದಾಚೆಯು ನೋಡಿತು ನಯನ ||
ಸುತ್ತಮುತ್ತಲು ಎಲ್ಲಾ ತಾಯಿ ದರುಶನ||
ಶಾರದೆ ಗಾನ ಶೃಂಗೇರಿಯ ಧ್ಯಾನ|||
||ಭಾವದಲೆಯಲಿ||
ಕರುಣಾಮಯಿ ಸಿರಿದೇವಿ ತಾಯಿ ಶಾರದೆ||
ಕರಮುಗಿವೆ ತಾಯಿ ನಿನಗೆ ಶರಣನಾಗಿಹೆ||
ನಿನ್ನ ಚರಣ ಸೇವೆ ಭಾಗ್ಯ ಸತತ ಬೇಡುವೆ ||
ಶಾರದೆ ಗಾನ ಶೃಂಗೇರಿಯ ಧ್ಯಾನ|||
||ಭಾವದಲೆಯಲಿ||
***