ಇವಳೇ ವೀಣಾಪಾಣಿ
ವಾಣಿ ತುಂಗಾತೀರ ವಿಹಾರಿಣಿ
ಶೃಂಗೇರಿ ಪುರವಾಸಿನಿ ||
||ಇವಳೇ ವೀಣಾಪಾಣಿ||
ಶಾರದಮಾತೆ ಮಂಗಳದಾತೆ
ಸುರಸಂಸೇವಿತೆ ಪರಮಪುನೀತೆ ||
ವಾರಿಜಾಸನ ಹೃದಯ ವಿರಾಜಿತೆ ||
ನಾರದಜನನಿ ಸುಜನ ಸಂಪ್ರೀತೆ |
||ಇವಳೇ ವೀಣಾಪಾಣಿ||
ಆದಿಶಂಕರ ಅರ್ಚಿತೇ ಮಧುರೆ
ನಾದಪ್ರಿಯೆ ನವಮಣಿಮಯ ಹಾರೆ ||
ವೇದಾಖಿಲಶಾಸ್ತ್ರ ಆಗಮಸಾರೆ ||
ವಿದ್ಯಾದಾಯಿನಿ ಯೋಗವಿಚಾರೆ |
||ಇವಳೇ ವೀಣಾಪಾಣಿ||
***