ಹಂಸದ್ವನಿಯು ಕೇಳದೇ ನಿನಗೇ ಶಾರದೆ | 

ನಿನ್ನ ಹಂಸದ್ವನಿಯು ಕೇಳದೇ ನಿನಗೇ ಶಾರದೆ | 

|| ಪ ||

ಶೃಂಗಪುರದ ವರ ತುಂಗೆತೀರದ 

ಮಂಗಳಾಂಗಿ ಪರಬ್ರಹ್ಮನ ರಾಣಿ ||

|| ಹಂಸದ್ವನಿಯು ||

ಮಾಣಿಕ್ಯ ವೀಣೆಯ ನುಡಿಸುತ ನೀ

ಮರೆತೆಯಾ ಮಮತೆಯ ಮಕ್ಕಳನು ||

ಮಧುರಭಾಷಿಣಿ ಸದಯರೂಪಿಣಿ

ಮಂಜುಳಭಾಷಿಣಿ ಶಾರದೆ ||

|| ನಿನ್ನ ಹಂಸದ್ವನಿಯು ||

ಮುಡಿಯಲಿ ಚಂದ್ರನ ಧರಿಸುತ ನೀ

ಮರೆತೆಯಾ ಮಮತೆಯ ಮಕ್ಕಳನು ||

ಶಶಿವಿಭೂಷಿಣಿ ಅಮೃತವರ್ಷಿಣಿ

ಮಂಗಳರೂಪಿಣಿ ಶಾರದೆ ||

|| ನಿನ್ನ ಹಂಸಧ್ವನಿಯು ||

ಕರದಲಿ ಗಿಳಿಯನು ಹಿಡಿಯುತ ನೀ

ಮರೆತೆಯಾ ಮಮತೆಯ ಮಕ್ಕಳನು ||

ಅಕ್ಷರೂಪಿಣಿ ಅಕ್ಷಯವರ್ಷಿಣಿ

ಮೋಕ್ಷಪ್ರದಾಯಿನಿ ಶಾರದೆ ||

ಮಧುರ

|| ಹಂಸದ್ವನಿಯು || 

***