ಮೂಡಣ ಅಂಚಲಿ ಮೂಡಿದ ರವಿಯು
ಏಳಮ್ಮ ಬೆಳಗಾಯ್ತು ||
ಮಾತಾಯಿ ನಮ್ಮಮ್ಮ ಚಾಮುಂಡಿ ಕೇಳೆ ಏಳಮ್ಮ ಬೆಳಗಾಯ್ತು |
ಏಳಮ್ಮ ಬೆಳಗಾಯ್ತು |
|| ಮೂಡಣ ||
ಮಹಿಷನ ಕೊಂದು ದನಿವಾಯಿತೇನು ಮಲಗಿಹೆ ಏತಕೆ ಹೀಗೆ ||
ಕಾದಿಹೆವಮ್ಮ ನಿನ್ನ ಮನೆ ಹೊರಗೆ
ನೀಡಮ್ಮ ದರುಶನ ನಮಗೆ |
ನೀಡಮ್ಮ ದರುಶನ ನಮಗೆ |
|| ಮೂಡಣ ||
ಹಕ್ಕಿಗಳೆಲ್ಲ ಹಾಡಿವೆ ನಿನಗೆ
ಮಂಗಳ ಸುಪ್ರಭಾತ ||
ಮಾತೆಯೇ ನಮಗೆ ಶುಭ ನೀಡು ಎಂದು ಕೋರಿದೆ ಆ ಶುಭಗೀತ |
ಕೋರಿದೆ ಆ ಶುಭಗೀತ |
|| ಮೂಡಣ ||
ಹೂಗಳು ಅರಳಿ ಕಾದಿಹವಮ್ಮ
ಧರಿಸಲು ನಿನ್ನಯ ಕೊರಳು ||
ಭಕ್ತರ ಕೋಟಿ ಕಾದಿಹುದಮ್ಮಾ
ಪಡೆಯಲು ಪಾದದ ದೂಳು |
ಪಡೆಯಲು ಪಾದದ ದೂಳು |
|| ಮೂಡಣ ||
***