ದುಂಬಿಯಂತೆ ಹಾರಿ ದುರ್ಗಾ ಬಂದಳು ನೋಡಿ ||
ನಂದಿನಿಯ ತಟಿಯಲ್ಲಿ ಆನಂದ ಕಟೀಲಿನಲಿ
ನದಿ ನಂದಿನಿಯ ತಟಿಯಲ್ಲಿ ಆನಂದ ಕಟೀಲಿನಲಿ ||
|| ದುಂಬಿಯಂತೇ ಹಾರಿ ||
ದುರ್ಗಮ ದಾನವ ದಮನಕ್ಕೆ
ದುರ್ಗೆ ಬಂದಳು ಅವತರಿಸಿ ||
ಕಲಕಲ ನಾದದಿ ಝಳ ಝಳ ಹರಿಯುವ
ಜಲದಲಿ ನೆಲೆಸಿಹ ಭ್ರಮರಾಂಬೆ ||
ದುರ್ಗಮ ದಾನವ ದಮನಕ್ಕೆ
ದುರ್ಗೆ ಬಂದಳು ಅವತರಿಸಿ ||
ದುಷ್ಟರ ತರಿಯಲು ಭಕ್ತರ ಕಾಯಲು ||
ದುರ್ಗದಂತೆ ತಾನೆದ್ದವಳು ||
|| ದುಂಬಿಯಂತೇ ಹಾರಿ ||
ಸಗ್ಗವ ಗೆಲಿದ ರಕ್ಕಸನ
ಸೊಕ್ಕನು ಮುರಿದಳು ತಾ ಬಂದು ||
ದಳ ದಳ ಬಿರಿಯುವ
ಪರಿಮಳ ಸುರಿಯುವ
ಅರಳಲಿ ಕುಳಿತಿಹ ಭ್ರಮರಾಂಬೆ ||
ಸಗ್ಗವ ಗೆಲಿದ ರಕ್ಕಸನ
ಸೊಕ್ಕನು ಮುರಿದಳು ತಾ ಬಂದು ||
ಷಟ್ಪದಿ ರೂಪದಿ ಕಚ್ಚುತ ಕೊಂದಳು ||
ದುಷ್ಟ ಅರುಣನ ಭ್ರಮರಾಂಬೆ ||
|| ದುಂಬಿಯಂತೇ ಹಾರಿ ||
***