ರಂಗು ರಂಗು ರಂಗವಲ್ಲಿ 

ಅಂದ ಚೆಂದ ಹೂವಿನಲ್ಲಿ  ||ರಂಗು||

ಶೃಂಗಾರದ ಹೂವಿನ ವೇಣಿ ದುರ್ಗೆ ಬಂದಳು

ಬಂಗಾರದ ಬಣ್ಣದ ರಾಣಿ ಅಂಬೆ ಬಂದಳು||

ನಂದಿನಿ ನದಿಯ ಕಟಿಯಲ್ಲಿ ಬಂದು ನಿಂತಳು

ಸುಂದರ ಕಟೀಲಿನಲ್ಲಿ ನಗುತ ನಿಂತಳು ||

 ||ಶೃಂಗಾರದ ಹೂವಿನ||

ತಾವರೆಯಂತ ಮೊಗದೊಳು

ದುಂಬಿಯಂತ ಕಣ್ಣವಳು ||

ಕೇದಗೆ ಹೂವಿನ ಮೈಯವಳು

ಕಾಡಿಗೆ ಬಣ್ಣದ ಜಡೆಯವಳು

|| ಶೃಂಗಾರದ ಹೂವಿನ ||

ಲ್ಲಿಗೆ ಮೊಗ್ಗಿನ ತುಟಿಯವಳು

ಮುದ್ದು ಮಲ್ಲಿಗೆ ನಗೆಯವಳು ||

ಮಾವಿನ ತಳಿರಾ ಕರದವಳು

ಕೋಗಿಲೆಯಂತ ಧ್ವನಿಯವಳು ||

 ||ಶೃಂಗಾರದ ಹೂವಿನ||

ನವಿಲಿನ ಹಾಗೆ ನಡೆಯವಳು

ಹಂಸದಂತೆ ಬಳುಕೋಳು ||

ತಿಂಗಳ ಬೆಳಕ ಮುಡಿಯವಳು

ಅಂದುಗೆ ಪಾದದ  ಸುಂದರಿಯು ||

 ||ಶೃಂಗಾರದ ಹೂವಿನ||