ಬಂದಳ್ ನೋಡೇ 

ಬಂದಳ್ ನೋಡೇ ಮಂದಿರದೊಳು ||

ಭಾಗ್ಯದ ಲಕ್ಷ್ಮಿ ಬಂದಳು ನೋಡೇ   || 

||ಪ||

ಅಂದೂಗೆ ಕಿರುಗೆಜ್ಜೆ ಕಿಲ್ ಕಿಲ್ ಕಿಲ್ಎನ್ನುತ್ತ  ||

ಮುದ್ದು ಪಾದದಿ ಹೆಜ್ಜೆಯನ್ನಿಕ್ಕುತ್ತಾ ||

||ಭಾಗ್ಯದ ಲಕ್ಷ್ಮಿ ಬಂದಳು ನೋಡೇ ||

ಎಡ ಬಲದಲ್ಲಿ ಗಜಗಳಿಂದ ಪೂಜೆಗೊಳ್ಳುತ್ತಾ||

ಬಿಡದೆ ತನ್ನ ಕರಕಮಲದಲಿ ಅಭಯ ಕೊಡುತಾ||

||ಭಾಗ್ಯದ ಲಕ್ಷ್ಮಿ ಬಂದಳು ನೋಡೇ ||

ಅತಿ ಹರುಷದಿ ಹಿತದಿ ತನ್ನ ಪತಿಯ ಸಹಿತಾಗಿ ||

ವಾರೆ ನೋಟದಿ ಭಕ್ತರಿಗೆ ವರವ ಕೊಡುತಲಿ ||

||ಭಾಗ್ಯದ ಲಕ್ಷ್ಮಿ ಬಂದಳು ನೋಡೇ ||

ಸೃಷ್ಟಿಗೊಡೆಯ ತಂದೆ ಜಗನ್ನಾಥ ವಿಠಲನ ||

ಪಟ್ಟದರಸಿ ಅರ್ತಿಯಿಂದಲಿ ಭಕ್ತರ ಮನೆಗೆ ||

||ಭಾಗ್ಯದ ಲಕ್ಷ್ಮಿ ಬಂದಳು ನೋಡೇ ||

 

***