ವರವ ಕೊಡೆ ಚಾಮುಂಡಿ ವರವ ಕೊಡೆ ||
ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವಕೊಡೆ ||
|| ವರವ ಕೊಡೆ ||
ಒಲವಿಂದ ನೀನೆನಗೆ
ವರನೀಡಿ ಸಲಹದಿರೆ ||
ನಿನ್ನಾಣೆ ನಾ ನಿನ್ನ
ಪಾದ ಬಿಡೆ .. ಪಾದ ಬಿಡೆ |
|| ವರವ ಕೊಡೆ ||
ಕುಂಕುಮವು ಅರಿಸಿನವು
ಹೊಳೆವಂತ ಕರಿಮಣಿಯು ||
ಸ್ಥಿರವಾಗಿ ಇರುವಂತೆ ವರವ ಕೊಡೆ
ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವ ಕೊಡೆ
|| ವರವ ಕೊಡೆ ||
ಬಾಗಿಲಲಿ ತೋರಣ
ಮದುವೆಮುಂಜಿ ನಾಮಕರಣ ||
ಯಾವಾಗಲೂ ಆಗುವಂತೆ ವರವ ಕೊಡೆ
ನಿನ್ನಾಣೆ ನಾ ನಿನ್ನ ಪಾದ ಬಿಡೆ ಪಾದ ಬಿಡೆ
|| ವರವ ಕೊಡೆ ||
ಹೆಸರುಳ್ಳ ಮನೆಕಟ್ಟಿ
ಹಸುಕರುವ ಸಾಲುಕಟ್ಟಿ ||
ವಂಶವೃದ್ಧಿ ಆಗುವಂತೆ ವರವ ಕೊಡೆ
ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವ ಕೊಡೆ
|| ವರವ ಕೊಡೆ ||
ಮನೆಯಲ್ಲಿ ಹರುಷಕೊಟ್ಟು
ಮನದಲ್ಲಿ ಶಾಂತಿ ಕೊಟ್ಟು ||
ಗಟ್ಟಿ ಹೃದಯ ತುಂಬುವಂತೆ ವರವ ಕೊಡೆ
ನಿನ್ನಾಣೆ ನಾ ನಿನ್ನ ಪಾದ ಬಿಡೆ ಪಾದ ಬಿಡೆ ||
|| ವರವ ಕೊಡೆ ||
***