ದೇವರ ಪರವಾಗಿ ದೀನರ ವರವಾಗಿ ||
ಬಂದ ಭೂಮಿಗೆ ಸುಬ್ರಹ್ಮಣ್ಯ
ದೈತ್ಯ ಹರನಾಗಿ ||
|| ದೇವರ ||
ಶಂಕರ ಸುತನಿವನು
ಓಂಕಾರಮಯನಿವನು ||
ನಾಗವಂಶದ ರಕ್ಷೆಗಾಗಿ ನಾಗನಾದವನು||
|| ದೇವರ ||
ತೆಪ್ಪದ ಉತ್ಸವದಿ
ಒಪ್ಪಾಗಿ ಮೆರೆದವನು ||
ಚಂಪಾಷಷ್ಠಿಯ ತೇರಿನಲ್ಲಿ
ಸೊಂಪಾಗಿ ಕುಳಿತವನು ||
|| ದೇವರ ||
ಮನದಲ್ಲಿ ನೆನೆದವರ
ಮನೆಯನ್ನು ಬೆಳಗುವನು ||
ಹೊತ್ತ ಹರಕೆಯ ನೀಡುವವರ
ಚಿತ್ತವ ತಣಿಸುವನು ||
|| ದೇವರ ||
ನವಿಲ ಮೇಲೇರಿ ನಲಿಯುತ್ತ ಕುಳಿತವನು ||
ಕುಕ್ಕೆ ಕ್ಷೇತ್ರದ ಸುಬ್ರಹ್ಮಣ್ಯನೆ
ಭಕ್ತರಕ್ಷಕನು ||
|| ದೇವರ ||
***