|| ಸಾರಿದ ಭಕ್ತ ಸಂಸಾರಿ ನಿನ್ನಯ ಪಾದ
ವಾರಿಜವನು ತೋರೋ ಕಾರುಣ್ಯ ನಿಧಿ ಬೇಗ ||
ಯಾರಿಗೆ ದೂರುವೆನೋ ಹೇ ಶ್ರೀನಿವಾಸ
ಯಾರೆನ್ನ ಸಲಹುವರೋ || ಪ ||
ಸಾರಿದ ಭಕ್ತ ಸಂಸಾರಿ ನಿನ್ನಯ ಪಾದ
ವಾರಿಜವನು ತೋರೋ ಕಾರುಣ್ಯ ನಿಧಿ ಬೇಗ ||
|| ಯಾರಿಗೆ ದೂರುವೆನೋ ||
ಕಷ್ಟ ಜನುಮಕೆ ಬಂದೆನೋ ಧಾರುಣಿಯೊಳು
ದುಷ್ಠರಿಂದಲಿ ನೊಂದೆನೋ ||
ನಿಷ್ಟುರ ಬೇಡವೋ ನಿನ್ನ ನಂಬಿದ ಮೇಲೆ
ಸೃಷ್ಟಿಗೊಡೆಯ ಎನ್ನ ಬಿಟ್ಟು ಸಲಹಬೇಡಾ||
|| ಯಾರಿಗೆ ದೂರುವೆನೊ ||
ಹಿಂದೆ ಮಾಡಿದ ಕರ್ಮವೋ
ಈ ಭವದೊಳು ಮುಂದಾಗಿ ತೋರುತಿದೆ ||
ಇಂದೇನು ಗತಿ ಅದರಿಂದ ನೊಂದೆನೊ ನಾನು ||
ಮಂಧರದರ ಗೋವಿಂದಾ ನೀನಲ್ಲದೇ||
|| ಯಾರಿಗೆ ದೂರುವೆನೋ ||
ಹಲವು ಪರಿಯ ಕಷ್ಟವ ನಿನ್ನ ಪಾದ
ಜಲಜದ ಕರುಣದಲಿ ||
ಸುಲಿಗೆಗೊಟ್ಟೆನೋ ನಾನು ಸೂರೆಗಾರರಿಗೆಲ್ಲ ||
ಒಲವಾಗು ಎನ್ನೊಳು ಪುರಂದರ ವಿಠ್ಠಲ ||
|| ಯಾರಿಗೆ ದೂರುವೆನೋ ||