ಮಹಾಪ್ರಭು  ಮಹಮಹಾಪ್ರಭು||

ಶ್ರೀಮಲೆ ಮೇಲೇ ಬಾಳ್ವ ಮಹಾಪ್ರಭು||

||ಮಹಾಪ್ರಭು||


ಪ್ರಕೃತಿಯೆ ತೂಗಿ ಜೋಗುಳ ಹಾಡಲು|

ಪ್ರಣವ ಸ್ವರೂಪಗೆ ಮಂತ್ರಗಳೇಕೆ||

||ಮಹಾಪ್ರಭು||


ಸಪ್ತಸ್ವರಗಳ ದೇವಾ ನಿನ್ನ ಸನ್ನಿಧಿಯೋಳ್|

ಸಹಸ್ರದಳ ಪದ್ಮವಾಗಿಡಲೇನು||

ನಾಥಾ ನಿನ್ನ ಕಾರುಣ್ಯ ಬೇಡುವೀ ದಾಸನಿಗೆ|

ಮೋಕ್ಷದಾ ಮಾರ್ಗ ನೀ ತೋರಬೇಕು||

||ಮಹಾಪ್ರಭು||


ಶ್ರೀನಾಮ ಕೀರ್ತನೆ ಘೋಷಣೆಗಳ ಮೇಳ|

ನಡೆ ಮಡಿಯಂತೇ ಶ್ರೀ ನಡೆಗೆ||

ಬೆಳಗುವಾ ಕರ್ಪೂರ ಹೋಮವಾಗುರಿದಿದೆ|

ಸುಡಲೇನು ಪಾಪವ ಶ್ರೀಭೂತನಾಥ||

||ಮಹಾಪ್ರಭು||


***