ಭಗವಾನ್ ಶರಣಂ ಭಗವತಿ ಶರಣಂ ಶರಣಂ ಶರಣಂ ಅಯ್ಯಪ್ಪ
ಭಗವತಿ ಶರಣಂ ಭಗವಾನ್ ಶರಣು ಶರಣಂ ಶರಣಂ ಅಯ್ಯಪ್ಪ ||
|| ಪ ||
ಭಗವಾನ್ ಶರಣು (ಭಗವತಿ ಶರಣು)
ದೇವನೆ ಶರಣು (ದೇವಿ ಶರಣು)
ಭಗವಾನೆ (ಭಗವತಿಯೇ)
ದೇವನೇ (ದೇವಿಯೇ)
|| ಭಗವಾನ್ ಶರಣಂ ||
ಅಹಂಕಾರವನು ಅಳಿಸಿಡುವೆ ಶರಣು ಶರಣು ಅಯ್ಯಪ್ಪ ||
ಹಗಲು ಇರುಳು ನಿನ ನಾಮ ಸ್ಮರಿಸಿದೆ ಸ್ಮರಿಸಿದೆ ಅಯ್ಯಪ್ಪ ||
|| ಭಗವಾನ್ ಶರಣಂ ||
ಕರಿಮಲೆ ವಾಸ ಪಾಪವಿನಾಶ ಶರಣಂ ಶರಣಂ ಅಯ್ಯಪ್ಪ ||
ಕರೆಯಲು ಬರುವೆ ಕೇಳಿದ ಕೊಡುವೆ ಶರಣಂ ಶರಣಂ ಅಯ್ಯಪ್ಪ ||
|| ಭಗವಾನ್ ಶರಣಂ ||
ಮಹಿಷಿ ಸಂಹಾರ ಮದಗಜ ವಾಹನ ಶರಣಂ ಶರಣಂ ಅಯ್ಯಪ್ಪ ||
ಕಿರುನಗೆ ಹಾಸ ಸುಂದರ ರೂಪ ಶರಣಂ ಶರಣಂ ಅಯ್ಯಪ್ಪ ||
ಆರುವಾರವು ವೃತವಿರುತ ಸುಂದರ ನಿನ್ನೇ ಕಾಣಬಂದೊ||
ಹಾಲಭಿಷೇಕ ನಿನಗಪ್ಪ ಇಲ್ಲಿ ಭಕ್ತರ ಕಡೆ ನೀ ನೋಡಪ್ಪಾ ||
|| ಭಗವಾನ್ ಶರಣಂ ||
ತೆಂಗಿನಕಾಯಿಯು ನಿನಗಪ್ಪ ಸುಂದರನಾಮ ನಮಗಪ್ಪ ||
ಕರ್ಪೂರ ದೀಪಾ ನಿನಗಪ್ಪಾ ನಿನ್ನ ಕರುಣೆಯ ದೃಷ್ಟಿಯು ನಮಗಪ್ಪ ||
ತುಪ್ಪಭಿಷೇಕ ನಿನಗಪ್ಪ ನಿನ್ನ ದಿವ್ಯ ದರ್ಶನ ನಮಗಪ್ಪ ||
ದಿನವೂ ಬೇಡುವೆ ಅಯ್ಯಪ್ಪ ಅರುಳ್ ನೀಡಪ್ಪ ನೀ ನಮಗಪ್ಪ ||
ದೇವನ ಪಾದ ದೇವಿಯ ಪಾದ ದೇವನೆ ಶರಣು ಅಯ್ಯಪ್ಪ ||
ನಾವೆಲ್ಲ ಬಂದೋ ಹಾಡಲಪ್ಪ
ತಂದೆಯೇ ನಿನ್ಮಹ ಪಾದವಪ್ಪ ||
|| ಭಗವಾನ್ ಶರಣಂ ||
***