ವೃಂದಾವನ ನೋಡಿರೋ 

ಗುರುಗಳ |

ಯತಿಗಳ |

ಮುನಿಗಳ |

ರಾಘವೇಂದ್ರರ |

ವೃಂದಾವನ ನೋಡಿರೋ   

|| ಪ ||

ವೃಂದಾವನ ನೋಡಿ 

ಆನಂದ ಮದವೇರಿ 

ಚಂದದಿ ದ್ವಾದಶ ಪುಂಡ್ರಾಂಕಿತಗೊಂಬ |

ವೃಂದಾವನ ನೋಡಿರೋ       

||ವೃಂದಾವನ ||

ತುಂಗಭದ್ರಾ ನದಿಯ ತೀರದಿ ಇದ್ದ  

ತುಂಗಮಂಟಪ ಮಧ್ಯದಿ ||

ಶೃಂಗಾರ  ತುಳಸಿ ಪದ್ಮಾಕ್ಷ ಸರಗಳಿಂದ ||

ಮಂಗಳಕರ ಮಹಾ ಮಹಿಮೆಯಿಂದೊಪ್ಪುವ        

||ವೃಂದಾವನ ||

ದೇಶದೇಶದಿ ತಿರುಗುತ

ಇಲ್ಲಿಗೆ ಬಂದು ವಾಸವಾಗಿ ಸೇವಿಪಾ  ||

ಭಾಷೆ ಕೊಟ್ಟಂದದಿ ಬಹುವಿಧ ವರಗಳ ||

ಸೂಸುವ ಕರ ಮಹಾಮಹಿಮೆಯಿಂದೊಪ್ಪುವ       

||ವೃಂದಾವನ ||

ನಿತ್ಯಸನ್ನಿಧಿ ಸೇವಿಪ

ಭಕ್ತರಿಗೆಲ್ಲ ಮತ್ತಭೀಷ್ಟಕರೆವ ||

ಸತ್ಯಾದಿಗುಣಸಿಂಧು ವೆಂಕಟವಿಠ್ಠಲನ ||

ನಿತ್ಯಸನ್ನಿಧಿಯಿಂದ ನಿರುತ ಪೂಜೆಯಗೊಂಬ       

||ವೃಂದಾವನ ||

 ***