ಮಕರ ಸಂಕ್ರಮ ದೀಪಾವಳಿಯು ನಾಡಿಗೆ ಬಂದಾಗ

ಮನಸ್ಸಿನೊಳಗಿನ ಮಣಿಕಂಠ ನೀ ಸಂತಸಗೊಂಡಾಗ ||

ನಾನಲ್ಲ ಕವಿಯು ಶ್ರೀ ಮೃದು ಮಂದಸ್ಮಿತ ಬಣ್ಣಿಸಲು

ಎಲ್ಲಾ ಮರೆತು ಹಾಡೋ

ಅಸತೋಮ ಸದ್ಗಮಯ ||

|| ಮಕರ ಸಂಕ್ರಮ ದೀಪಾವಳಿಯು ||

ತತ್ವವು ತನ್ನಸ್ಥಿತ್ವವ ಪಡೆವುದು ತತ್ವವನೇ ಸೇರಿ

ನಿತ್ಯ ನಿರಂತರ ಬೇಡುವೆ ಸದ್ಗತಿ ಸನ್ನಿಧಿಯ ಸೇರಿ ||

ಉತ್ತಮವೆಂದು ನಿತ್ಯವು ನಿಂದು ನನ್ನನೆ ಮರೆತು 

ನಾ ಅರಿಯದೆ ಹಾಡೋ

ತಮಸೋಮಾ ಜ್ಯೋತಿರ್ಗಮಯ |

|| ಮಕರ ಸಂಕ್ರಮ ದೀಪಾವಳಿಯು ||

ಕರ್ಪೂರ ಉರಿವುದು ಆರದೆ ಹೊನ್ನಿನ ಬೆಳಕಾಗಿ

ನಿಲ್ಲುವೆ ನಾನು ನಿನ್ನೆದುರಲ್ಲಿ ಒಂದೇ ಹಿಡಿಯಾಗಿ ||

ಹುಟ್ಟಿದೆ ನನ್ನ ಮನಸಲಿ ನಿನ್ನ ತೇಜೋ ರೂಪ 

ನನ್ನ ಭಕ್ತಿಯ ಹಾಡೂ

ಮೃತ್ಯೋರ್ಮ ಅಮೃತಂಗಮಯ |

|| ಮಕರ ಸಂಕ್ರಮ ದೀಪಾವಳಿಯು || 


***