ಮುದದಿ ಮುಕುಂದ ಸದನಕ ಬಂದ |

ದದಿಯ ಮೀಸಲು ಬೆಣ್ಣೆ ತಿಂದ 

ನಿನ್ನ ಕಂದ…  ಆನಂದಾ…  ||  


ಗೋಪಿಕೇಳ್ ನಿನ್ನ ಮಗ ಜಾರ |

ಇವ ಚೋರ , ಸುಕುಮಾರ ||  

|| ಗೋಪಿಕೇಳ್ ||

ಮಾರನ ಪಿತ ತಾ ಮನೆಯೊಳು ಪೊಕ್ಕ |

ಹಿಡಿಯ ಹೋದರೆ ಕೈಗೆ ಸಿಕ್ಕ |

ನೋಡಿ ನಕ್ಕ..ಬಾರಿ ಠಕ್ಕ…||

|| ಗೋಪಿಕೇಳ್ ||

ಹರೆಯದ ಪೋರಿ ಜಗದ ಕಂಗೋರಿ |

ಬರದಿಂದ ಸೀರೆಯ ಸೆಳೆದ |

ಕರವ ಪಿಡಿದಾ..ಮಾನ ಕಳೆದಾ..

|| ಗೋಪಿಕೇಳ್ ||

ಬಹಳ ದಿನವಾಯಿತು ಹೇಳುವುದು ಹೇಂಗೆ |

ಗೋಪಾಲನ ಮನಸ್ಸೊಮ್ಮೆ ಹಂಗೆ |

ಒಮ್ಮೆ ಹಿಂಗೆ..ಹೇಳುವುದು ಹೇಂಗೆ || 

|| ಗೋಪಿಕೇಳ್ ||

ರಾಧೆಯ ಮನದ ಮೋದ ಮುಕುಂದ |

ಶ್ರೀದ ವಿಠ್ಠಲನಾಟ ಚಂದ

ನಮ್ಮ ಶ್ರೀದ ವಿಠ್ಠಲನಾಟ ಚಂದ |

ನಯನಾನಂದ..ಆನಂದ…|| 

|| ಗೋಪಿಕೇಳ್ ||

***