ನೀನೇ ಇರುವ ಶ್ರೀಮಲೆಗೇ

ನಾವೆಂದು ಬರುವುದು ಹೂಮಲೆಗೆ ||

ನೀಲಿಮಲೆಯಲಿ.. ಉದಯಾಸ್ತವಾದರೆ..

ಹೇಗಯ್ಯ ಬರುವುದು ಕರಿಮಲೆಗೆ ||

ಅಯ್ಯನಿಗೆ ಶರಣು

ಅಯ್ಯನಯ್ಯನಿಗೆ ಶರಣು |

ಸ್ವಾಮಿ ಅಪ್ಪ ಶರಣು ಅಪ್ಪ 

ಪಂಪಾವಾಸನೆ  ಶರಣು ಅಪ್ಪ |

ಸ್ವಾಮಿ ಅಪ್ಪ ಶರಣು ಅಪ್ಪ 

ಪಂದಳವಾಸನೆ  ಶರಣು ಅಪ್ಪ |

|| ನೀನೇ ಇರುವ ಶ್ರೀಮಲೆಗೆ ||

ನಿನನಾಮ ಜಪದಿ ಮುಳುಗಿರಲು ಪಂಪೆಯಲೊಂದು ದಿನ ನಾವು 

ಸಂಕ್ರಮ ಸಂದ್ಯೆಗೆ ಸೇರಿಕೊಂಡಾಗ

ನಿನ ನಾಮವೊಂದೇ ಪಾವನ ಗಾನ ||

ಹತ್ತುವುದೊಂದೇ ಸ್ಮರಿಸುತ್ತ ನಿನ್ನ ಅದುವೇ ನಮ್ಮ ಕಾರ್ಯವಪ್ಪ ||

ಸ್ವಾಮಿ ದಿಂದಾಗ ತೋಮ್ 

ಅಯ್ಯಪ್ಪ ದಿಂದಾಗ ತೋಮ್ ||

|| ನೀನೇ ಇರುವ ಶ್ರೀಮಲೆಗೆ ||

ಶಾಪ ಮೋಕ್ಷವ ಪಡೆಯಲು ನಾವು ಶಬರಿ ಪೀಠಕೆ ಬರಬೇಕು 

ಸಾವಿರ ಗಾವುದ ನಡೆದರು ಸರಿಯೇ 

ಪೀಠವ ಸುತ್ತಿ ನಿಲಬೇಕು ||

ಹತ್ತುವುದೊಂದೇ ಸ್ಮರಿಸುತ್ತ ನಿನ್ನ ಅದುವೇ ನಮ್ಮ ಕಾರ್ಯವಪ್ಪ ||

ಸ್ವಾಮಿ ದಿಂದಾಗ ತೋಮ್ 

ಅಯ್ಯಪ್ಪ ದಿಂದಾಗ ತೋಮ್ ||

|| ನೀನೇ ಇರುವ ಶ್ರೀಮಲೆಗೆ || 

***