ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ||

ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ || 

||||

ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು ||

ದಾಯಾದಿ ಬಂಧುಗಳ ಬಿಡಲು ಬಹುದು ||

ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು ||

ಕಾಯಜಾಪಿತ ನಿನ್ನ ಡಿಯ ಬಿಡಲಾಗದು.. 

ಬಿಡಲಾಗದು… ಬಿಡಲಾ..ಗದು ||

 || ತೊರೆದು ||

ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದು ||

ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು ||

ಮಡದಿ ಮಕ್ಕಳ ಕಡೆಗೆ ತೊಲಗಿಸಿಯೇ ಬಿಡಬಹುದು ||

ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು ||

 ಬಿಡಲಾಗದು..   ಬಿಡಲಾ..ಗದು |

|| ತೊರೆದು ||

ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು ||

ಮಾನದಲಿ ಮನವ ತಗ್ಗಿಸಲುಬಹುದು ||

ಪ್ರಾಣನಾಯಕನಾದ ಆದಿ ಕೇಶವರಾಯ ||

ಜಾಣ ಶ್ರೀಕೃಷ್ಣ.. ನಿನ್ನಡಿಯ ಬಿಡಲಾಗದು ||

 ಬಿಡಲಾಗದು..   ಬಿಡಲಾ..ಗದು….

|| ತೊರೆದು ||

***