ಅಖಿಲಾಂಡ ಕೋಟಿಗೆ ಆನಂದವಾಗಲು
ಅವತಾರವೆತ್ತಿದ ಕಾರುಣ್ಯವೆ ||
ಹರಿಹರ ಶಕ್ತಿಯ ಸಾಫಲ್ಯವೇ ||
ನನ್ನ ಸ್ವರರಾಗ ಸುದೆಯಾಗಿ ನಲಿದಾಡುವೆ
||ಅಖಿಲಾಂಡ||
ನಾದಸರಸ್ಸಿಯಲಿ ಹಂಸ ಧ್ವನಿ ಕೇಳಿ
ವಾತಾಪಿಯಾದ ವಿನಾಯಕನೆ ||
ನನ್ನಲಿ ಏನೆಂದು ನೀ ಮನೆಮಾಡಿದೆ
ಒಂದನು ನಾ ಅರಿಯೆನು ||
||ಅಖಿಲಾಂಡ||
ಷಣ್ಮುಖ ಪ್ರಿಯನೆಂದು ಜಗವೆಲ್ಲ ಕರೆವಾಗ
ನಿನ್ನಯ ಆಟವ ನೋಡಿ ನೋಡಿ ||
ಪಳನಿಯಲಿರುವ ವೇಲಯ್ಯ ||
ಶಿವಶಕ್ತಿಗೆ ಸರಿಸಾಟಿ ಯಾರಯ್ಯ
||ಅಖಿಲಾಂಡ||
***