ನಂಬಿ ಬಂದೆ ಮುಖ್ಯಪ್ರಾಣ 

ತುಂಬಿಕೊಂಡೆ ರಾಮಧ್ಯಾನ ||ಪ||

ಶಂಭು ಶಿವನ ಅಂಶದೇವ

ಇಂಬುನೀಡಿ ಕಾಯೋದೇವ  ||

||ನಂಬಿ ಬಂದೆ||

ಮಧುರಭಾಷಿ ಆಂಜನೇಯ 

ಮಧವಿನಾಶಿ ವಜ್ರಕಾಯ ||

ರಾಮಚರಣ ಶರಣ ನಿನ್ನ

ನಾಮ ಭಜಿಪೆ ಕಾಯೋ ಎನ್ನ ||

||ನಂಬಿ ಬಂದೆ||

ಅಭುದಿ ಜಿಗಿದ ಅಮಿತತ್ರಾಣ

ಶುಭವ ನೀಡೋ ಮುಖ್ಯಪ್ರಾಣ ||

ಸ್ವಾಮಿ ಭಕ್ತ ವಾಯುಜಾತ

ಪ್ರೇಮದಿಂದ ಸಲಹುದೇವ ||

||ನಂಬಿ ಬಂದೆ||

ನುಡಿಸು ನಡೆಸು ಮುಖ್ಯಪ್ರಾಣ

ಒಡಿಯೂರೊಡೆಯ ಶರಣು ಬಂದೆ ||

ಮೃಡನ ರೂಪ ಜ್ಞಾನದೀಪ

ಗುಡಿಯ ಬೆಳಗು ಬಾಗಿನಿಂದೆ  ||

||ನಂಬಿ ಬಂದೆ||

***