ಇದೇ ರಾಮ ನಾಮ 

ಪರಮ ರಾಮ ನಾಮ

ಪರಮಾತ್ಮ ಧ್ಯಾನ ಶ್ರೀರಾಮ ರಾಮ 

ಪರಮಾತ್ಮ ಧ್ಯಾನ ಶ್ರೀರಾಮ||

|| ಪ ||

ಶಿಲೆಯ ಮೆಟ್ಟಿ ವನಿತೆಯ ಗೈದ 

ಶಿವ ಧನುನು ಮುರಿದ ರಾಮ||

ಶಿವಭಕ್ತ ರಾವಣನನ್ನು ಸಂಹರಿಸಿ ಮೆರೆದ ರಾಮ ||

ಹರಿಯು ಹರನು ಒಂದೇ ಎಂದು 

ಸಾರಿ ಸಾರಿ ಹೇಳಿದ ರಾಮ ||

|| ಇದೇ ರಾಮ ನಾಮ ||

ಜಾಂಬವಂತ ಜಪಿಸಿದ ರಾಮ ||

ಸುಗ್ರೀವ ಸಾರಿದ ರಾಮ ||

ತಾಯಿ ಶಬರಿ ಹರಸಿದ ರಾಮ ||

ಜನನ ಮರಣ ಕಳೆಯುವ ರಾಮ ||

ಜನನ ಮರಣ ಕಳೆಯುವ ರಾಮ ಪ್ರಾಣ ದಾನ ನೀಡುವ ರಾಮ 

|| ಇದೇ ರಾಮ ನಾಮ ||

***