ಪಾದವ ನಂಬಿದೆನು ಪ್ರಭು ಪಾದವ ನಂಬಿದೆನು

ನಿಷ್ಠೆಯ ಕಂಡಲ್ಲಿ ಕಷ್ಟವ ನೀಗುವ ಪಾದವ ನಂಬಿದೆನು || 

||ಪ||

ಸ್ವಾಮಿಯೇ ಅಯ್ಯಪ್ಪ ಸ್ವಾಮಿಯೇ ಅಯ್ಯಪ್ಪ 

ಸ್ವಾಮಿಯೇ ಅಯ್ಯಪ್ಪ ಶರಣು ಶರಣು ಅಯ್ಯಪ್ಪ ||

|| ಪಾದವ ನಂಬಿದೆನು||

ಜಾತಿ ಭೇದ ನಮ್ಮಲಿಲ್ಲ  ||

ಉಚ್ಚ ನೀಚ ಉಳಿದೇ ಇಲ್ಲ ||

ಮಾಲೆಯಲ್ಲಿ ಮಾನವರು ನಿನ್ನವರೆಲ್ಲ ||

ನಿನ್ನ ನಾಮ ಸ್ಮರಣೆಯಲ್ಲೇ ನಮ್ಮ ಜೀವನವೆಲ್ಲ ||

|| ಪಾದವ ನಂಬಿದೆನು ||

ಪೇಟದಿಂದ ಹಾಡಿಕೊಂಡು

ಕಾಡುಮೇಡು ಸುತ್ತಿಕೊಂಡು ||

ಒಟ್ಟಾಗಿ ಹದಿನೆಂಟು ಮೆಟ್ಟಲೇರಿ 

ಸ್ವಾಮಿ ನಿನ್ನನು ಕಂಡು ನಾವು ಮುಕ್ತಿಕೋರಿ ||

|| ಪಾದವ ನಂಬಿದೆನು ||