ಚಿಂತೆ ಏಕೆ ಮನವೇ 

ಗುರು ರಾಘವೇಂದ್ರನಿರಲು ||

ಚಿಂತೆ ಕಳೆದು ನಿಶ್ಚಿಂತೆಯಿಂದ

ಇರುವಂತೆ ಮಾಡುವ ಚಿಂತಾಮಣಿಯಿರೆ||

|| ಚಿಂತೆ ಏಕೆ ಮನವೇ ||

ಭೀತಿ ಏಕೆ ಮನವೇ 

ಗುರುರಾಯ ಬಳಿಯಲ್ಲಿ ಇರಲು |

ಭೀತಿ ಕಳೆದು ನಿರ್ಭೀತಿಯಿಂದ

ಇರುವಂತೆ ಮಾಡುವ ಗುರುರಾಯನಿರಲು ||

|| ಚಿಂತೆ ಏಕೆ ಮನವೇ ||

ದುಃಖವೇತಕೆ ಮನವೇ

ಸದ್ಗುರು ನಾಮ ನಿನ್ನಲ್ಲಿರಲು||

ದುಃಖ ಕಳೆದು ಸುಖ ನೀಡಲೆಂದೇ

ಗುರು ಸಾರ್ವಭೌಮ ಇರುವಾಗ ನಿನಗೆ||

|| ಚಿಂತೆ ಏಕೆ ಮನವೇ ||

ಮುಳುಗಬೇಡ ಮನವೇ  

ಆಸೆಯ ಕಡಲಲ್ಲಿ ನೀನು ||

ತಾವರೆ ಎಲೆಯು ಜಲರಾಶಿಯಲ್ಲಿ

ಇರುವಂತೆ ನೀನಿರೆ ಗುರುರಾಯ ಮೆಚ್ಚುವ ||

|| ಚಿಂತೆ ಏಕೆ ಮನವೇ ||

 ***