ಜಗದೋದ್ಧಾರನ ಆಡಿಸಿದಳ್ ಯಶೋದಾ ||
ಜಗದೋದ್ಧಾರನಾ ಮಗನೆಂದು ತಿಳಿಯುತ ||
ಸುಗುಣಾಂತ ರಂಗನ ಆಡಿಸಿದಳ್ ಯಶೋಧಾ ||
|| ಜಗದೋದ್ಧಾರನಾ ||
ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳ್ ಯಶೋದಾ
|| ಜಗದೋದ್ಧಾರನಾ ||
ಅಣೋರಣೀಯನ ಮಹತೋ ಮಹೀಯನ
ಅಪ್ರಮೇಯನ ಆಡಿಸಿದಳ್ ಯಶೋದಾ
|| ಜಗದೋದ್ಧಾರನಾ ||
ಪರಮ ಪುರುಷನ ಪರವಾಸುದೇವನ
ಪುರಂದರ ವಿಠಲನ ಆಡಿಸಿದಳ್ ಯಶೋದಾ
|| ಜಗದೋದ್ಧಾರನಾ ||
***