ಸುಂದರ ಮೂರುತಿ ಮುಖ್ಯಪ್ರಾಣ

ಬಂದ ನಮ್ಮ ಮನೆಗೆ || 

||ಪ||

ಪ್ರಾಣ ಬಂದ ಮನೆಗೆ

ಶ್ರೀ ರಾಮ ನಾಮ ಧ್ವನಿಗೆ ||

|| ಸುಂದರ ಮೂರುತಿ ||

ಕನಕಾಲಂದುಗೆ ಗೆಜ್ಜೆ ಜಣ ಜಣವೆನುತ 

ಜಣಕು ಜಣಕು ಎಂದು ಕುಣಿ ಕುಣಿದಾಡುತ ||

|| ಪ್ರಾಣ ಬಂದ ಮನೆಗೆ ||

ತುಂಬುರು ನಾರದ ವೀಣೆ ಬಾರಿಸುತ 

ರಾಮ ನಾಮ ಪಾಡುತ ||

|| ಪ್ರಾಣ ಬಂದ ಮನೆಗೆ ||

ಪುರಂದರ ವಿಠಲನ ನೆನೆದು ಪಾಡುತಲಿ

ಆಲಿಂಗನ ಮಾಡುತಲಿ ||

|| ಪ್ರಾಣ ಬಂದ ಮನೆಗೆ ||

***