ರಥವನೇರಿದ ರಾಘವೇಂದ್ರ
ರಾಯ ಗುಣಸಾಂದ್ರ ||
ಸತುವ ಮಾರ್ಗದಿ ಸಂತತ ಸೇವಿಪರಿಗೆ
ಹಿತದಿಂದಲಿ ಮನೋರಥವ ಕೊಡುವೆನೆಂದು ||
|| ರಥವನೇರಿದ ||
ಚತುರದಿಕ್ಕುವಿಧಿಕ್ಕುಗಳಲ್ಲಿ
ಸ್ಮರಿಸುವ ಜನರಲ್ಲಿ
ಮಿತಿಯಿಲ್ಲದೆ ಬಂದು ಓಲೈಸುತಲಿ ವರವ ಬೇಡುತಲಿ ||
ಸ್ತುತಿಸುತ್ತ ಪರಿಪರಿ ನತರಾದಿಗರಿಗೆ
ಗತಿನೀಡದೆ ಸರ್ವಥಾ ನಾಬಿಡೆನೆಂದು||
|| ರಥವನೇರಿದ ||
ಅತುಳ ಮಹಿಮನ ದಿನದಲ್ಲಿ ದಿತಿಜ ವಂಶದಲ್ಲಿ
ಉತ್ಪತ್ತಿಯಾಗಿ ಉಚಿತವಾಗಲಿ ಉತ್ತಮ ಮತಿಯಲ್ಲಿ ||
ಅತಿಶಯವಿರುತಿರೇ ಪಿತನ ಬಾಧೆಗೆ ಮನ್ಮಥಪಿತನೊಲಿಸಿದ ಜಿತಕರಣದಲಿ ||
|| ರಥವನೇರಿದ ||
ಪ್ರಥಮ ಪ್ರಹ್ಲಾದ ವ್ಯಾಸಮುನಿಯೇ
ರಾಘವೇಂದ್ರ ಯತಿಯೇ
ಪತಿತೋದ್ದಾರಿಯೆ ಪಾವನಕಾರಿಯೆ ಕೈ ಮುಗಿವೆನು ದೊರೆಯೇ ||
ಕ್ಷಿತಿಯೊಳು ಗೋಪಾಲ ವಿಠಲನ ನೆನೆ ನೆನೆಯುತ ಮಂತ್ರಾಲಯದೊಲು ಶುಭವೀಯುತ ||
|| ರಥವನೇರಿದ ||
***