ಮಧುಕರ ವೃತ್ತಿ ಎನ್ನದು ||
ಬಲು ಚೆನ್ನದು | ಮಧುಕರ ವೃತ್ತಿ ಎನ್ನದು ||
|| ಪ ||
ಪದುಮನಾಭನ ಪಾದ ||
ಪದುಮ ಮಧುಪವೆಂಬ
|| ಮಧುಕರ ವೃತ್ತಿ ||
ಕಾಲಿಗೆ ಗೆಜ್ಜೆ ಕಟ್ಟಿ ||
ನೀಲ ವರ್ಣನ ಗುಣ |
ಆಲಾಪಿಸುತ ಬಲು ಓಲಗ ಮಾಡುವಂಥ ||
|| ಮಧುಕರ ವೃತ್ತಿ ||
ರಂಗನಾಥನ ಗುಣ ಹಿಂಗದೆ ಪಾಡುತ್ತ ||
ಶೃಂಗಾರ ನೋಡುತ್ತ ಕಂಗಳ ಆನಂದವೆಂಬ ||
|| ಮಧುಕರ ವೃತ್ತಿ ||
ಇಂದಿರಾಪತಿ ಪುರಂದರವಿಠಲನಲ್ಲಿ |||
ಚೆಂದದ ಭಕ್ತಿಯಿಂದ ಆನಂದ ಪಡುವಂಥ ||
|| ಮಧುಕರ ವೃತ್ತಿ||
***