ಧನ್ಯನಾದೆ ರಾಮ ಧನ್ಯನಾದೇ 

ಧನ್ಯನಾದೆ ರಾಮ ನಿನ್ನ ಪಾದ ಕಮಲವನ್ನು ಕಂಡು

ಧನ್ಯನಾದೇ


ಮುತ್ತಿನಂಥ ಲಕ್ಷ್ಮೀ ದೇವಿ

ಒತ್ತುವಂತ ನಿನ್ನ ಪಾದ

ಒತ್ತುವೆನು ಈಗ ನಾನು 

ಮುಕ್ತಗಾಗಿ ಬೇಡುವೆನೋ||

ತಮ್ಮನಾದ ಲಕ್ಷ್ಮಣನ 

ನಿರ್ಮಲದಿ ಕೂಡಿಕೊಂಡು

ನೀವು ಮೂವರೊಂದಾಗಿ

ಹೋಗೋದೆಲ್ಲಿಗೇ ರಾಮ ||

ಇಂದು ನಮ್ಮ ಮನೆಯೊಳಿದ್ದು 

ನಾಳೆ ಮುಂಜಾನೆ ಎದ್ದು

ನೀವು ಮೂವರೊಂದಾಗಿ

ಪೋಗಬೇಕಯ್ಯ ರಾಮ ||