ಮುದ್ದುರಾಮರ ಬಂಟ 

ಬುದ್ಧಿಯುಳ್ಳ ಹನುಮಂತ

ಹದ್ದಾಗಿ ಹಾರಿದನೆ ಆಕಾಶಕೆ || 

|| ಪ ||


ನಿದ್ರೆಗೈವ ಸಮಯದಿ ಎದ್ದು ಬಾರೆಂದರೆ

 ಅಲ್ಲಿದ್ದ ರಕ್ಕಸರನೆಲ್ಲಾ ಗೆಲಿದಾತನೆ ||

|| ಅ ಪ ||


ದಾರಿ ದೂರವೆಂದು ದಾರಿಯನೆ ನಿರ್ಮಿಸಿದ

ಧೀರ ರಾಮರ ಬಂಟ ಹನುಮಂತನೆ |

 ನೋಡಿ ಬಾರೆಂದರೆ ಪೋಗಿ ಲಂಕೆಯ ಸುಟ್ಟು

ಬೇಗದಲಿ ಮರವನೇರಿ ಕುಳಿತಾತನೆ || 

|| ಮುದ್ದು ರಾಮರ ಬಂಟ ||


ಅಶೋಕ ವನದಲ್ಲಿ ಸೀತೆಯನು ನೋಡಿದ

ಶ್ರೀರಾಮರ ಬಂಟ ಹನುಮಂತನೆ |

ಮಾತೆಯನು ಮಾತಾಡಿಸಿ ಕ್ಷೇಮ ಸುದ್ದಿ

ತಿಳಿಸಿದ ರಘುವೀರ ದೂತ ಜಾಣ ನಿವನೆ || 

|| ಮುದ್ದು ರಾಮರ ಬಂಟ ||


ಆತನ ಮಾತಿಗೆ ಸೇತುವೆನೆ ಕಟ್ಟಿಸಿದ

ಸೀತಾರಾಮರ ಬಂಟ ಹನುಮಂತನೆ |

ಸೀತಾದೇವಿ ಅಮ್ಮನಿಗೆ ಪ್ರೀತಿಯ ಬಂಟನಾದ

ಮುಖ್ಯಪ್ರಾಣ ಹಯವದನನ ದೂತನೆ || 

 || ಮುದ್ದು ರಾಮರ ಬಂಟ ||

***