ನಂಬಿ ಬಂದೆ ಮುಖ್ಯಪ್ರಾಣ |

ತುಂಬಿಕೊಂಡೆ ರಾಮಧ್ಯಾನ ||ಪ||

ಶಂಭು ಶಿವನ ಅಂಶದೇವ |

ಇಂಬುನೀಡಿ ಕಾಯೋದೇವ  ||

||ನಂಬಿ ಬಂದೆ||

ಮಧುರಭಾಷಿ ಆಂಜನೇಯ |

ಮಧವಿನಾಶಿ ವಜ್ರಕಾಯ ||

ರಾಮಚರಣ ಶರಣ ನಿನ್ನ |

ನಾಮ ಭಜಿಪೆ ಕಾಯೋ ಎನ್ನ ||

||ನಂಬಿ ಬಂದೆ||

ಅಭುದಿ ಜಿಗಿದ ಅಮಿತತ್ರಾಣ |

ಶುಭವ ನೀಡೋ ಮುಖ್ಯಪ್ರಾಣ ||

ಸ್ವಾಮಿ ಭಕ್ತ ವಾಯುಜಾತ |

ಪ್ರೇಮದಿಂದ ಸಲಹುದೇವ ||

||ನಂಬಿ ಬಂದೆ||

ನುಡಿಸು ನಡೆಸು ಮುಖ್ಯಪ್ರಾಣ |

ಒಡಿಯೂರೊಡೆಯ ಶರಣು ಬಂದೆ ||

ಮೃಡನ ರೂಪ ಜ್ಞಾನದೀಪ |

ಗುಡಿಯ ಬೆಳಗು ಬಾಗಿನಿಂದೆ  ||

||ನಂಬಿ ಬಂದೆ||

***