ಹರಿಹರ ಪುತ್ರನೇ ಅಯ್ಯಪ್ಪ ಸ್ವಾಮಿಯೆ
ಕರಮುಗಿವೆ ಕೈವಲ್ಯ ಬೇಡಿ || ಪ ||
ಎದುರಲ್ಲೇ ನಿಂತೆನ್ನ ಮುದದಿಂದ ಹರಸಯ್ಯ
ಕರುಣೆಯ ದರ್ಶನ ನೀಡಿ |
ಕಣ್ಣಲ್ಲಿ ಕರ್ಪೂರ ಉರಿಯೆ
ಆತ್ಮದ ಆನಂದ ನಿನ್ನಿಂದ ದೊರೆಯೇ
|| ಹರಿಹರ ಪುತ್ರನೇ ||
ತಾರಕ ಬ್ರಹ್ಮ ನೀನಯ್ಯಪ್ಪ ಸ್ವಾಮಿ
ತಾರಲು ದರ್ಶನ ಈ ಜನ್ಮ ಪುಣ್ಯ ||
ಲೋಕವೀರಂ ಮಹಾ ಪೂಜ್ಯಂ ಸರ್ವ ರಕ್ಷಾಕರಂ ವಿಭುಂ
ಪಾರ್ವತಿ ಹೃದಯಾನಂದಮ್ ಶಾಸ್ತಾರಾಂ ಪ್ರಣಮಾಮ್ಯಹಮ್ |
ಓಂ ನಾಮ ನಾ ಕಲಿತೆ ನಿನ್ನೆದುರಿನಲ್ಲಿ
ಅರಿವಿನ ಆಗರವೇ ಹರಸು ನನ್ನ ||
ವರದಾನ ಮೂರ್ತಿ ನೀ ಸಂಗೀತ ಸಾಗರದ
ಅಲೆಗಳಲಿ ಮುಳುಗಿಸು ನನ್ನ
ಆ ಅಲೆಯೋಲ್ ಆ ಅಲೆಯೋಳು ಆಯಿದ ಹನಿ ತಂದು
ಅಭಿಷೇಕ ಜಲವಿದು ಇಂದು |
ಹೃದಯ ಕುಂಭದಲಿ ನಾ ತುಂಬಿಕೊಂಡೆ |
ತಾಳ ಪ್ರಪಂಚ ನೀನಯ್ಯಪ್ಪ ಸ್ವಾಮಿ
ದಿಂದಗ ತೊಮ್ ಕುಣಿವ ಕರ್ಮ ಪುಣ್ಯ||
ಪಾಂಡ್ಯೇಶ ವಂಶ ತಿಲಕಮ್ ಕೇರಳೇ ಕೇಳಿ ವಿಗ್ರಹಮ್
ಆರ್ತತ್ರಾಣ ಬಲಂ ದೇವಂ ಶಾಸ್ತಾರಂ ಪ್ರಣಮಾಮ್ಯಹಮ್ |
ಪದ್ಮಾಂಬುದಿಯಲಿ ಪದ್ಮಾಸನದಲಿ
ಮಿಂದು ಮಂಡಲ ಜಪವ ಮಾಡೇ ||
ಮನಸಿನ ಕರ್ಮಕೆ ಮಾಯದ ವ್ಯಾದಿಯದು
ತನುವಿಂದ ತಾ ದೂರ ಸರಿಯೇ |
ಅನುದಿನವು ಉದಯದಿಂ ಸಂದ್ಯಾದಿಯಾಗಿ
ನಿನ ಜಪವ ನಾ ಮಾಡುತಿರಲು |
ನಾನು ಮಾಡಿದ ಪಾಪ ಕಳೆದಿತ್ತು |
ವ್ಯಾದಿಗೆ ವೈದ್ಯ ನೀನಯ್ಯಪ್ಪ ಸ್ವಾಮಿ
ನೀಡಿದೆ ವರಗಳೇ ಪುಣ್ಯ ಪುಣ್ಯ ||
|| ಹರಿಹರ ಪುತ್ರನೇ ||