ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ |
ನೀನೆ ಗತಿಯಪ್ಪ , ನನಗೆ ನೀನೆ ಗತಿಯಪ್ಪ ||
||ಸ್ವಾಮಿ ಅಯ್ಯಪ್ಪ||
ಅಂಧಕಾರದಲ್ಲಿ ಅಲೆದಾಡುತಲಿರುವೆ
ಕಂಗಳಿದ್ದು ತಂದೆ ಏನು ಕಾಣದಿರುವೆ ||
ಏಕೆ ಇನ್ನು ದೇವ ಕರುಣೆ ತೋರದಿರುವೆ ||
ಬೆಳಕಿನೆಡೆಗೆ ನನ್ನಾ ಬೇಗ ನಡೆಸು ನನ್ನ ಪ್ರಭುವೆ||
||ಸ್ವಾಮಿ ಅಯ್ಯಪ್ಪ||
ಸಿರಿಯು ಬೇಕು ಎಂದು ಕೇಳಲಾರೆನಯ್ಯ |
ಸ್ವರ್ಗ ನೀಡು ಎಂದು ಬೇಡಲಾರೆನಯ್ಯ |
ಮುಕ್ತಿಗಾಗಿ ತಂದೆ ಕೈಯ ಚಾಚೆನಯ್ಯ||
ಶಾಂತಿ ನೆಮ್ಮದಿಯನು ನೀಡಿ ದೇವ ರಕ್ಷಿಸಯ್ಯ||
||ಸ್ವಾಮಿ ಅಯ್ಯಪ್ಪ ||
ಕಂಗಳಲ್ಲಿ ನಿನ್ನಾ ಚರಣ ತುಂಬಿಕೊಳಲಿ
ಮನಸ್ಸಿನಲ್ಲಿ ನಿನ್ನ ಮೂರ್ತಿ ತುಂಬಿಕೊಳಲಿ ||
ಕಿವಿಗಳಲ್ಲಿ ನಿನ್ನಾ ಕೀರ್ತಿ ತುಂಬಿಕೊಳಲಿ||
ಉಸಿರು ಉಸಿರಿನಲ್ಲೂ ನಿನ್ನಾ ನಾಮ ತುಂಬಿಕೊಳಲಿ||
||ಸ್ವಾಮಿ ಅಯ್ಯಪ್ಪ||
***