ಶಬರಿಮಲೆ ಹತ್ತಿ ಬರೋ ಆಸೆ ಆಸೆ

ನಿನ್ನೆ ಕಾಣ ಕಾದಿರುವೆ ಪಂದಲ ರಾಜ ||

ನಿಷ್ಠೆಯಿಂದ ವೃತಮಾಡಿ ಮಂಡಲ ಕಾಲ ಇದ್ದೇ |

ಶಾಸ್ತ್ರದಂತೆ ಇಂದು ಮಾಲೆ ಧರಿಸಿದೆ|| 

|| ಶಬರಿಮಲೆ||

ಪಾದುಕೆಯ ಧರಿಸದೇ ಕಲ್ಲು ಮುಳ್ಳು ದಾರಿಯಲಿ

ನಡೆದು ಬಂದೆ ಅಯ್ಯಪ್ಪ ಬರಿಗಾಲಲ್ಲಿ ||

ರೆಯು ನೀನೆ ಸ್ನೇಹಿತನು ನೀನೆ |

ನಿನ್ನ ನಂಬಿ ನಿಂತೆನಯ್ಯ ಮಂಗಳ ರೂಪ

ಸ್ವಾಮಿ ಶರಣಂ ಅಯ್ಯಪ್ಪ ||

|| ಶಬರಿಮಲೆ||

ಆ ಚಳಿಯ ಕಾಲದಲ್ಲಿ ತಣ್ಣನೆಯ ನೀರಿನಲ್ಲಿ

ಪ್ರತಿದಿನವೂ ಸ್ನಾನ ಮಾಡಿ ನಿನ್ನ ನುತಿಸಿದೆ

ಗುಡಿಯ ಸೇರುವಾಸೆ ದ್ವಜ ಕಾಣುವಾಸೆ |

ಆಸೆ ಗೈದು ಬಂದೆ ಸ್ವಾಮಿ ಕರುಣೆಯ ತೋರು

ಸ್ವಾಮಿ ದರುಶನ ನೀಡು ||

|| ಶಬರಿಮಲೆ||

**