ಮಂದಾರ ಮಳೆ ಮಳೆಯು ಸುರಿಯೇ

ಪಾವನವಾ ಮಲೆಯು

ಕರ್ಪೂರ ಸುಗಂಧ ಬೀಸೇ

ಅದು ನಿನ್ನ ಸನ್ನಿಧಿಯೂ ||

ಒಂದು ಹಾಡು ಹಾಡಬೇಕೆನ್ನೋ

ಆಸೆಯೇ ಅಯ್ಯಪ್ಪ

ಒಂದು ಸಾರಿ ನೋಡಬೇಕೆನ್ನೋ

ಆಸೆಯೇ ಅಯ್ಯಪ್ಪ ||

||ಮಂದಾರ ಮಳೆ||

ನಿನ ನೋಡೇ ಬಂದಾಗ

ಕಾನನವೇ ಮನೆಯು

ತೀರ್ಥಕ್ಕೆ ಬರವಿಲ್ಲ 

ಪಾವನ ಪಂಪೆ ಇದೆ ||

ಅನುಗಾಲ ಕಾಣುವೆ ನಿನ್ನ

ನಿರುಪಮ ಚೈತನ್ಯ |

ದಯತೋರಿ ನಿನರೂಪ

ಕರುಣಿಸು ನನ್ನಯ್ಯ |

|| ಮಂದಾರ ಮಳೆ ||

ನಿನ ನಾಮ ಜಪ ಮಾಡಿ

ಬರುವೆನು ದಾರಿಯಲಿ

ಹದಿನೆಂಟು ಹಂತಗಳ 

ಹತ್ತುವೆ ಸುಲಭದಲೀ ||

ತಂದೇನು ಇರುಮುಡಿಯನ್ನು

ಅಪಾರ ಭಕ್ತಿಯಲಿ

ತವರೂಪ ದರ್ಶಿಸೋ

ಮೋಹವೂ ನನ್ನಪ್ಪ ||

|| ಮಂದಾರ ಮಳೆ  ||

***